ಕಣಗಳು

 ಕಣಗಳು


ಪರಮಾಣುಗಳು ದ್ರವ್ಯದ ಮುಖ್ಯ ರಚನಾ ಚೌಕಟ್ಟುಗಳು. ಆದರೆ, ಸಹಜವಾಗಿ ಪ್ರತಿಯೊಂದು ಪರಮಾಣುಗಳು ಒಂಟಿಯಾಗಿ ಅಸ್ತಿತ್ವದಲ್ಲಿರುವುದಿಲ್ಲ. ಪರಮಾಣುಗಳು ಸಾಮಾನ್ಯವಾಗಿ ಇತರ ಪರಮಾಣು ಗಳೊಂದಿಗೆ ಸೇರಿಕೊಂಡಿರುತ್ತವೆ. ಒಂದು ಪರಮಾಣು ಇನ್ನೊಂದು ಅಥವಾ ಒಂದಕ್ಕಿಂತ ಹೆಚ್ಚು ಪರಮಾಣು ಗಳೊಂದಿಗೆ ಕೂಡಿಕೊಂಡಾಗ ಅದು ಕಣವಾಗಿ ಪರಿವರ್ತಿತವಾಗುತ್ತದೆ. ಒಂದೇ ಪರಮಾಣುಗಳಿಂದ ಮಾಡಲ್ಪಟ್ಟ ಹಲವು ಕಣಗಳು ಸೇರಿಕೊಂಡು ಮೂಲವಸ್ತುವಾಗುತ್ತದೆ. ಉದಾಹರಣೆಗೆ, ನಮ್ಮ ಸುತ್ತಲೂ ಗಾಳಿ ಯಲ್ಲಿ ಇರುವ ಆಮ್ಲಜನಕ, ಸ್ವತಂತ್ರವಾಗಿ ಚಲಿಸುವ ಅದರ ಪರಮಾಣುವಲ್ಲ ಬದಲಿಗೆ ಅದನ್ನು ಆಮ್ಲಜನಕದ ಕಣಗಳು, ಪ್ರತಿಯೊಂದು ಆಮ್ಲಜನಕ ಕಣವೂ 2 ಆಮ್ಲಜನಕ ಪರಮಾಣುಗಳ ಸಂಯೋಜನೆ. ಇದನ್ನು 02 ಎಂದು ಬರೆಯುತ್ತಾರೆ. ವಿವಿಧ ಪರಮಾಣುಗಳಿಂದ ಮಾಡಲ್ಪಟ್ಟ ಹಲವು ಬೇರೆ ಬೇರೆ ಕಣಗಳು ಒಟ್ಟಿಗೆ ಸೇರಿದಾಗ ಸಂಯುಕ್ತ ವಸ್ತು ಎಂದು ಕರೆಯಲ್ಪಡುತ್ತದೆ.

ಓಜೋನ್
ಯಾವಾಗ 3 ಆಮ್ಲಜನಕ ಪರಮಾಣುಗಳು
ಕೋವಳೆನ್ಸಿ ಬಂಧದಲ್ಲಿ ಒಟ್ಟುಗೂಡುತ್ತವೆಯೋ, ಈಗ ತ್ರಿ-ಪರಮಾಣುಗಳನ್ನು ಹೊಂದಿದೆ ಆಮ್ಲಜನಕ ಕಾರಣವಾಗುತ್ತದೆ. ಇದನ್ನು 03 ಎಂದು ಬರೆಯಲಾಗುತ್ತದೆ. ಇದನ್ನೇ ಓಜೋನ್ ಎಂದು ಕರೆಯಲಾಗುತ್ತದೆ.


ಪರಮಾಣುಗಳ ನಡುವಿನ ಬಂಧಗಳು

ಪರಮಾಣುಗಳು ಒಟ್ಟುಗೂಡಿಸುವ ಅಥವಾ ಬಂಧಕ್ಕೊಳಪಡುವ ಹಲವು ವಿಧಗಳಿವೆ. ಒಂದು ಬಲಭಾಗದಲ್ಲಿ ತೋರಿಸುವ ಅಯಾನಿಕ್ ಬಂಧ,
ಇನ್ನೊಂದು ಮೇಲೆ ತೋರಿಸಿರುವ ಕವಲನಿ ಬಂಧ, ಯಾವಾಗ ಪರಮಾಣುಗಳು ಒಂದಕ್ಕಿಂತ ಹೆಚ್ಚು ಎಲೆಕ್ಟ್ರಾನ್‌ಗಳನ್ನು ಹಂಚಿಕೊಳ್ಳುತ್ತವೆಯೋ ಈಗ, ಇದು ಏಕೆಂದರೆ, ಪರಮಾಣುವಿನ ಹಲವು ಪದದ ಅಥವಾ ಕವಚಗಳಲ್ಲಿ ನಿರ್ಧಿಷ್ಟ ಸಂಖ್ಯೆಯ ಎಲೆಕ್ಟ್ರಾನ್‌ಗಳು ಹಿಡಿಸುತ್ತವೆ. ಅತ್ಯಂತ ಒಳಗಿನ ಪದರ 2 ಎಲೆಕ್ಟ್ರಾನ್‌ಗಳವರೆಗಿನ ಸಾಮರ್ಥ್ಯ ಹೊಂದಿದ್ದರೆ, ಅದರ ನಂತರದ ಪದರ 8 ಎಲೆಕ್ಟ್ರಾನ್‌ಗಳವರೆಗಿನ ಸಾಮರ್ಥ್ಯ ಹೊಂದಿದೆ. ಅತ್ಯಂತ ಹೊರಗಿರುವ ಪದರದಲ್ಲಿ ಸದಾ ಎಲೆಕ್ಟ್ರಾನ್‌ಗಳಿರುವುದಿಲ್ಲ ಆಗ ಅದು ಇತರ ಪರಮಾಣುವಿನ ಪದರದ ಎಲೆಕ್ಟ್ರಾನ್ ಕೆಲ ಸಮಯದವರೆಗೆ ಎರವಲು ಪಡೆಯಬಹುದು. ಅದೇರೀತಿ ಅತ್ಯಂತ ಹೊರಗಿನ ಪದರದಲ್ಲಿ ಒಂದೇ ಎಲೆಕ್ಟ್ರಾನ್ ಇದ್ದಲ್ಲಿ ಅದು ಇತರ ಪರಮಾಣು ವಿನೊಂದಿಗೆ ಅದನ್ನು ಕೆಲ ಸಮಯದವರೆಗೆ ಹಂಚಿಕೊಳ್ಳಬಹುದು. ಹೀಗೆ 2 ಪರಮಾಣುಗಳು ಒಂದು ಅಥವಾ ಅದಕ್ಕಿಂತ ಹೆಚ್ಚು ಎಲೆಕ್ಟ್ರಾನ್‌ಗಳನ್ನು ಹಂಚಿಕೊಂಡಲ್ಲಿ ಅದು ಕೋವಳೆನ್ಸಿ ಬಂಧನವಾಗುತ್ತದೆ.

ಬದಲಾಗುವ ಕಣಗಳು


ದಹನ ಕ್ರಿಯೆ ಒಂದು ರಾಸಾಯನಿಕ ಬದಲಾವಣೆ.
ಯಾವಾಗ ಕಣಗಳು ತಮ್ಮ ಪರಮಾಣುಗಳನ್ನು ಬಿಡುಗಡೆ ಮಾಡಲು ಬೇರ್ಪಡುತ್ತವೆ ಈಗ ಇದು ಸಂಭವಿಸುತ್ತದೆ. ನಂತರ ಪರಮಾಣುಗಳು
ಮತ್ತೊಮ್ಮೆ ಕೊಡಿ ಅಥವಾ ಬೇರೆ ಬಂಧಕ್ಕೊಳಪಟ್ಟು ಹೊಸ ಸಂಯೋಜನೆಯಾಗುತ್ತದೆ. ಇದರ ಪರಿಣಾಮವಾಗಿ,
ವಸ್ತುಗಳು ಅಥವಾ ರಾಸಾಯನಿಕಗಳು ಬೇರೆಯೇ ವಸ್ತುಗಳು
ಅಥವಾ ರಾಸಾಯನಿಕಗಳಲ್ಲಿ ಬದಲಾಗುತ್ತವೆ. ಏನನ್ನಾದರೂ ದಹಿಸಿದಾಗ, ಅದರ ಕಣಗಳು ಆಮ್ಲಜನಕದ ಕ್ಷಣಗಳೊಂದಿಗೆ ಕೂಡಿಕೊಂಡು, ಬೆಳಕು ಮತ್ತು ಉಷ್ಣತೆಯನ್ನು ಬಿಡುಗಡೆ ಮಾಡುತ್ತವೆ.

ಸಾಮಾನ್ಯ ಕಣಗಳು
ಇವು ಸೂಕ್ಷ್ಮದರ್ಶಕದ ಕೆಳಗೆ ಗೋಚರಿಸುವ ಉಪ್ಪಿನ ಸಣ್ಣ ಹರಳುಗಳು. (ಬಣ್ಣಗಳನ್ನು ಕಂಪು ಟರ್‌ನಿಂದ ತುಂಬಲಾಗಿದೆ) ಪ್ರತಿಯೊಂದು ಹರಳು ಮಿಲಿಯಾಂತರ ಕಣಗಳನ್ನು ಒಳಗೊಂಡಿರುತ್ತದೆ. ಪ್ರತಿಯೊಂದು ಕಣವೂ 2 ಪರಮಾಣುಗಳಿಂದ ಮಾಡಲ್ಪಟ್ಟಿದೆ. ಒಂದು ಸೋಡಿಯಂ Na, ಹಾಗೂ ಇನ್ನೊಂದು ಕ್ಲೋರೀನ್ CI. ಈ ಎರಡು ಪರಮಾಣುಗಳು ಕೋವಲೆ ಬಂಧಕ್ಕೊಳಪಟ್ಟು ಸೋಡಿಯಂ ಕ್ಲೋರೈಡ್ NaCl ಆಗಿದೆ, ಹಲವು ದಶಲಕ್ಷಗಳಷ್ಟು ಕಣಗಳು ಒಟ್ಟಾಗಿ ಒಂದೇ ಒಂದು ಆಕಾರವನ್ನು ರಚಿಸಿ ಉಪ್ಪಿನ ಹರಳನ್ನು ರಚಿಸುತ್ತವೆ.

Comments

  1. ಪೆಟ್ಟಿಗೆಗೆ ಘಟನೆಗಳಿಗೆ ತಾನೆಷ್ಟು ಕಾಪಾಡಬೇಕು

    ReplyDelete

Post a Comment

Popular posts from this blog

Liquid and chemicals in kannada ದ್ರವ್ಯ ಮತ್ತು ರಾಸಾಯನಿಕಗಳು part 1