Liquid and chemicals in kannada ದ್ರವ್ಯ ಮತ್ತು ರಾಸಾಯನಿಕಗಳು part 1
ದ್ರವ್ಯ ಮತ್ತು ರಾಸಾಯನಿಕಗಳು
ಸೂಜಿಯ ಮನೆಯಿಂದ ಹಿಡಿದು ನಕ್ಷತ್ರಗಳ ವರೆಗೆ ಎಲ್ಲಾ ವಸ್ತುಗಳು, ದ್ರವ್ಯಗಳು ಮತ್ತು ರಾಸಾಯನಿಕಗಳು ಪರಮಾಣುಗಳಿಂದ ರೂಪಿತವಾಗಿವೆ. ಹಲವು ಪರಮಾಣುಗಳು ಒಟ್ಟಿಗೆ ಸೇರಿ ಕಣವಾಗಿ ಮಾರ್ಪಡುತ್ತವೆ. ಅಣು ಹಾಗೂ ಕಣಗಳು ವಿಭಜಿತಗೊಳ್ಳಬಹುದು ಹಾಗೂ ಹೊಸ ಸಂಯೋಜನೆಯೊಂದಿಗೆ ರೂಪುಗೊಳ್ಳಬಹುದು. ಇದು ರಾಸಾಯನಿಕ ಬದಲಾವಣೆ. ದ್ರವ್ಯವು ಘನ, ದ್ರವ ಮತ್ತು ಅನಿಲ ಎಂಬ 3 ಸ್ಥಿತಿಗಳಲ್ಲಿ ಅಸ್ತಿತ್ವದಲ್ಲಿದೆ.
ಪರಮಾಣುಗಳು
ದೊಡ್ಡ ವಸ್ತುಗಳು ಸಣ್ಣ ವಸ್ತುಗಳಿಂದ ಮಾಡಲ್ಪಟ್ಟಿದೆ. ಉದಾಹರಣೆಗೆ ಒಂದು ಮರದ ಕೋಣೆಯು, ಹಲವು ಮರದ ಹಲಗೆ ಗಳಿಂದ ಮಾಡಲ್ಪಟ್ಟಿದೆ, ಒಂದು ಮರದ ಹಲಗೆಯು ಸಣ್ಣ ಸಣ್ಣ ಮರದ ನಾರುಗಳಿಂದ ರೂಪಿತವಾಗಿದೆ, ಆ ಒಂದು ಮರದ ನಾರು ಲಿಗ್ನಿನ್' ಎಂಬ ಸೂಕ್ಷ ನಾರುಗಳಿಂದ ನಿರ್ಮಿತವಾಗಿದೆ. ಹಾಗೂ ಈ ಲಿಗ್ನಿನ್ ನಾರು, ಅತೀ ಸೂಕ್ಷ್ಮ ಪರಮಾಣುಗಳಿಂದ ರಚಿತವಾಗಿದೆ. ಒಂದು ಸೂಜಿಯ ಮನೆಯಿಂದ ಇಡೀ ಗಗನಚುಂಬಿ ಕಟ್ಟಡದ ವರೆಗೆ ಯಾವುದೇ ವಸ್ತುವನ್ನು ತೆಗೆದುಕೊಳ್ಳಿ, ಈ ಎಲ್ಲವೂ - ಪರಮಾಣುಗಳು ಎಂಬ ಸಾಮಾನ್ಯ ದೃಷ್ಟಿಗೆ ಗೋಚರವಾಗದ, ಅತೀ ಸೂಕ್ಷ್ಮ ವಸ್ತುಗಳಿಂದ ರೂಪಿತವಾಗಿದೆ ಎಂಬುದು ಕ್ರಮೇಣ ನಿಮಗೆ ತಿಳಿಯುತ್ತದೆ. ಎಲ್ಲಾ ವಸ್ತುಗಳು, ಉಪಕರಣಗಳು, ಪದಾರ್ಥಗಳು, ರಾಸಾಯನಿಕಗಳು ಹಾಗೂ ಇತರ ಎಲ್ಲಾ ರೂಪದ ದ್ರವ್ಯಗಳು ಪರಮಾಣುಗಳನ್ನು ಹೊಂದಿದೆ.
ವಿವಿಧ ಬಗೆಯ ಪರಮಾಣುಗಳು
ಎಲ್ಲಾ ಪರಮಾಣುಗಳು ಒಂದೇ ರೀತಿಯಲ್ಲಿ. ಇದರಲ್ಲಿ ಸುಮಾರು 112 ವಿವಿಧ ಬಗೆಗಳಿವೆ. ಎಲ್ಲಾ ವಿವಿಧ ಬಗೆಯ ಹಣ್ಣುಗಳನ್ನು ರಾಸಾಯನಿಕ ಮೂಲವಸ್ತುಗಳು ಎನ್ನಲಾಗುತ್ತದೆ. ಕೆಲ ರಾಸಾಯನಿಕ ಮೂಲವಸ್ತುಗಳ ಹೆಸರುಗಳು ನಿಮಗೆ ಚಿರಪರಿಚಿತವಾಗಿದೆ. ಉದಾಹರಣೆಗೆ ಅಲುಮಿನಿಯಂ, ಕಬ್ಬಿಣ ಹಾಗೂ ಕ್ಯಾಲ್ಸಿಯಂ. ಇತರ ಕೆಲ ರಾಸಾಯನಿಕ ಮೂಲವಸ್ತುಗಳು ಹೆಸರುಗಳು ಅಷ್ಟೇನು ಪರಿಚಿತವಲ್ಲ, ಉದಾಹರಣೆಗೆ ಕೆನಾನ್, ಟ್ರಯಂ ಹಾಗೂ ಜಿರ್ಣೋನಿಯಂ, ವಿವಿಧ ರಾಸಾಯನಿಕ ಮೂಲವಸ್ತುಗಳ ಪರಮಾಣುಗಳು ಒಂದಕ್ಕಿಂತ ವಿಭಿನ್ನವಾಗಿವೆ. ಆದ್ದರಿಂದ ಅಲ್ಯುಮಿನಿಯಂ ಪರಮಾಣುಗಳು ಕಬ್ಬಿಣದ ಪರಮಾಣು ಗಳಿಗಿಂತ
ವಿಭಿನ್ನವಾಗಿವೆ, ಇತ್ಯಾದಿ. ಆದರೆ ಒಂದೇ ರಾಸಾಯನಿಕ ಮೂಲವಸ್ತುವಿನ ಪರಮಾಣುಗಳು ಒಂದೇ ರೀತಿಯಾಗಿವೆ. ಕಬ್ಬಿಣದ ಒಂದು ತುಂಡು ಕೋಟ್ಯಾಂತರ ಕಬ್ಬಿಣ ಪರಮಾಣುಗಳನ್ನು ಹೊಂದಿರುತ್ತದೆ. ಎಲ್ಲವೂ ಕೂಡ ಒಂದೇ ರೀತಿಯಾಗಿರುತ್ತದೆ. ಮತ್ತು ಅವು ವಿಶ್ವದ ಇತರೆಡೆ ಇರುವ, ಇತರ ಕಬ್ಬಿಣ ಪರಮಾಣುಗಳ ರೀತಿಯಲ್ಲೇ ಇರುತ್ತದೆ.
ಪರಮಾಣುಗಳು
ಒಟ್ಟಿಗೆ ಸೇರಿದಾಗ
ಕೆಲವೊಮ್ಮೆ
ಪರಮಾಣುಗಳು
ಸ್ವತಂತ್ರವಾಗಿರುತ್ತದೆ. ಆದರೆ ಇತರ ಸಮಯದಲ್ಲಿ ಅವು ಇತರ
ಪರಮಾಣು ಗಳೊಂದಿಗೆ ಸೇರಿ,
ಗುಂಪುಗೂಡಿ ಕಾರಣಗಳಾಗುತ್ತವೆ.
ಇವುಗಳನ್ನು ಸಾಮಾನ್ಯವಾಗಿ ಒಟ್ಟಿಗೆ
ಜೋಡಿಸಲ್ಪಟ್ಟ ಚೆಂಡುಗಳ” ಚಿತ್ರಗಳ
ಮೂಲಕ ಚಿತ್ರಿಸಲಾಗುತ್ತದೆ.
ಆನೆಗಳ ಕೂಡಾ ಪರಮಾಣುಗಳು
ವಸ್ತುವೊಂದರ ಪ್ರತಿಯೊಂದು ಸಣ್ಣ ಭಾಗ ಅಥವಾ ತುಣುಕು ಕೂಡಾ ಪರಮಾಣುಗಳಿಂದ ರಚಿಸಲ್ಪಟ್ಟಿದೆ. ನಿಮ್ಮ ಕಾಲ ಕೆಳಗಿರುವ ಭೂಮಿ, ಮರಗಳು,
ಕಾರುಗಳು, ಮನೆಗಳು, ಕಂಪುಟರ್‌ಗಳು, ಮೊಬೈಲುಗಳು, ನೀರು ಹಾಗೂ ಕಣ್ಣಿಗೆ ಕಾಣದ ಗಾಳಿಯು ಇದರಲ್ಲಿ ಸೇರಿವೆ. ಎಲ್ಲಾ ಜೀವಿತ ವಸ್ತುಗಳು ಕೂಡಾ ಪರಮಾಣುಗಳು, ಪಕ್ಷಿಗಳು, ಹೂಗಳು, ಅತೀ ಸೂಕ್ಷ್ಮ ಜೀವಿಗಳು, ಬೃಹತ್ ಮರಗಳು, ಹುಲಿಗಳು, ಆನೆಗಳು - ಹಾಗೂ ನಿಮ್ಮ ಸ್ವಂತ ದೇಹ ಕೂಡಾ.
ಬ್ರಹ್ಮಾಂಡ ದಾದ್ಯಂತ ಪರಮಾಣುಗಳು
ಪ್ರಪಂಚದಲ್ಲಿರುವ ಎಲ್ಲವೂ ನಿಮ್ಮ ಗ್ರಹ ಭೂಮಿಯನ್ನು ಸೇರಿಸಿ, ಎಲ್ಲವೂ ಪರಮಾಣುಗಳಿಂದ ರಚಿತವಾಗಿವೆ. ಮತ್ತು ವಿಶ್ವದ ಹೊರಗಿರುವ ಎಲ್ಲವೂ ಕೂಡ ಪರಮಾಣುಗಳಿಂದ ಮಾಡಲ್ಪಟ್ಟಿದೆ. ಆಕಾಶ ಪೂರ್ಣವಾಗಿ ಖಾಲಿಯಾಗಿದೆ. ಅದನ್ನು ತೇಲಾಡುತ್ತಿರುವ ಸಣ್ಣ ಸಣ್ಣ ಕಣಗಳು ಹಾಗೂ ಅನಿಲಗಳಿಂದ ತುಂಬಿದೆ. ಆಕಾಶದಲ್ಲಿರುವ ವಸ್ತುಗಳಾದ ಗ್ರಹಗಳು, ನಕ್ಷತ್ರಗಳು ಮತ್ತು ಧೂಮಕೇತುಗಳು, ಎಲ್ಲವೂ ಪರಮಾಣುಗಳಿಂದ ಮಾಡಲ್ಪಟ್ಟಿದೆ. ನಮ್ಮ ಸ್ವಂತ ಉಪಗ್ರಹಗಳು, ರಾಕೆಟ್‌ಗಳು ಹಾಗೂ ಅಂತರಿಕ್ಷ ವಾಹಕಗಳು ಕೂಡಾ, ಬ್ರಹ್ಮಾಂಡದಲ್ಲಿರುವ
ಬಹುತೇಕ ದ್ರವ್ಯಗಳು, ನಮ್ಮ ಸೂರ್ಯ ನಂತಹ ಇತರ ನಕ್ಷತ್ರಗಳಲ್ಲಿ. ನಕ್ಷತ್ರಗಳ ಮುಖ
ರಾಸಾಯನಿಕ ಮೂಲ ವಸ್ತುವೆಂದರೆ
ಜಲಜನಕ. ಆದ್ದರಿಂದ ಜಲಜನಕ
ಇಡೀ ಬ್ರಹ್ಮಾಂಡದಲ್ಲಿ ಅತಿ
ಹೆಚ್ಚು ಲಭ್ಯವಿರುವ ಮೂಲವಸ್ತು. ಬ್ರಹ್ಮಾಂಡದಲ್ಲಿರುವ ಪ್ರತೀ 100
ಪರಮಾಣುಗಳಲ್ಲಿ 93 ಜಲಜನಕದ
ಪರಮಾಣುಗಳಾಗಿದ್ದರೆ ಇತರ 7 ಮಾತ್ರ ಇತರ ಪರಮಾಣುಗಳಾಗಿವೆ.
ಪರಮಾಣುಗಳು ಎಷ್ಟು ದೊಡ್ಡದಾಗಿದೆ?
- ಸೂಕ್ಷ್ಮ, ಅತಿ ಸೂಕ್ಷ !! ಒಂದು ಸಾಧಾರಣ ಪರಮಾಣು ಒಂದು ಮೀಟರ್‌ನ 0000000001 ನಷ್ಟು ದೊಡ್ಡದಿರುತ್ತದೆ (! ಮಿಲಿಮೀಟರ್‌ನ 1 ದಶಲಕ್ಷನೇ ಭಾಗ). ಒಂ
- ಬಲೂನನ್ನು ಊದಿ, ಅದು ಗಾತ್ರದಲ್ಲಿ ದೊಡ್ಡದಿದ್ದರೆ ತೂಕದಲ್ಲಿ ಏನೂ ಇರುವುದಿಲ್ಲ. ಆದರೆ ಇದು 100 ಬಿಲಿಯ ಬಿಲಿಯ (100,000,000,000,000,000.000) ಪರಮಾಣುಗಳನ್ನು ಗಾಳಿಯ ರೂಪದಲ್ಲಿ ಹೊಂದಿರುತ್ತದೆ.
- ಮರಳಿನ ಒಂದು ಸಣ್ಣ ಕಣ ಬಹಳ ಪರಮಾಣುಗಳನ್ನು ಹೊಂದಿದೆ, ಅದರ ಪ್ರತಿಯೊಂದು ಪರಮಾಣು, ಸೂಜಿಯ ಮೊನೆಯಷ್ಟು ದೊಡ್ಡದಿದ್ದರೂ, ಆ ಮರಳಿನ ಕಣ ಸುಮಾರು 2 ಕಿಲೋಮೀಟರ್‌ನಷ್ಟು ದೊಡ್ಡದಾಗಿರುತ್ತಿತ್ತು.
Comments
Post a Comment